ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ
ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು ಕಿರುತೆರೆ ನಟಿ ಪೊಲೀಸ್ ಠಾಣೆ ದೂರು ಕೊಟ್ಟಿದ್ದಾರೆ.

ಬೆಂಗಳೂರು: ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು ಕಿರುತೆರೆ ನಟಿ ಪೊಲೀಸ್ ಠಾಣೆ ದೂರು ಕೊಟ್ಟಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಮಿಡಿ ಕಿಲಾಡಿಗಳು ಮೂಲಕ ನಟ ಮಡೆನೂರು ಮನು ಜನಪ್ರಿಯತೆ ಪಡೆದುಕೊಂಡಿದ್ದರು.
ಸದ್ಯ ಮಡೆನೂರು ಮನು ಅವರಿಗೆ ಬಂಧನದ ಭೀತಿ ಶುರುವಾಗಿದೆ.. ಅಲ್ಲದೆ ಮಡೆನೂರು ಮನು ಕುಲದಲ್ಲಿ ಕೀಳ್ಯಾವುದೋ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಈ ಚಿತ್ರ ಮೇ 23ರಂದು ಬಿಡುಗಡೆ ಯಾಗಲಿದೆ. ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಮಡೆನೂರು ಮನುಗೆ ಕಿರುತೆರೆ ನಟಿ ಪರಿಚಯ ಆಗಿದೆ. ಆ ಬಳಿಕ ಇವರ ಮಧ್ಯೆ ಗೆಳೆತನ ಬೆಳೆದಿದೆ.
ಈಗ ನನ್ನ ಮೇಲೆ ಮನು ಅತ್ಯಾಚಾರ ಮಾಡಿದ್ದಾನೆ ಎಂದು ನಟಿ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಮನುಗಾಗಿ ಹುಡುಕಾಟ ನಡೆದಿದೆ. ಇನ್ನು ಮಡೆನೂರು ಮನು ಅವರು ಕಾಮಿಡಿ ಕಿಲಾಡಿಗಳು ಮೂಲಕ ಭರ್ಜರಿ ಫೇಮಸ್ ಆದರು. ಆ ಬಳಿಕ ಅವರಿಗೆ ವಿವಿಧ ರೀತಿಯ ಆಫರ್ಗಳು ಬರೋಕೆ ಆರಂಭಿಸಿದವು. ಆದರೆ, ಅವರು ಅಳೆದು-ತೂಗಿ ಸಿನಿಮಾ ಮಾಡೋಕೆ ಪ್ರಾರಂಭಿಸಿದರು. ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಹೀರೋ ಆಗುವುದರಲ್ಲಿದ್ದರು. ಸಿನಿಮಾ ರಿಲೀಸ್ ಸಂದರ್ಭದಲ್ಲೇ ಅವರ ವಿರುದ್ಧ ಈಗ ಗಂಭೀರ ಆರೋಪ ಎದುರಾಗಿದೆ.