
ಹಾಸನ: ಮದುವೆ ಮಂಟಪದಲ್ಲಿ ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ನವವಧು ಪರೀಕ್ಷೆ ಬರೆದಿದ್ದಾರೆ.. ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಅನಸೂಯ ದಂಪತಿ ಪುತ್ರಿ ಕವನ ಪರೀಕ್ಷೆ ಬರೆದ ನವವಧು. ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಕವನ ಅಂತಿಮ ವರ್ಷದ ಕೊನೆಯ ಪರೀಕ್ಷೆಗೆ ಹಾಜರಾಗಿದ್ದಾರೆ..
ಇಂದು ಗುಡ್ಡೆನಹಳ್ಳಿಯ ದಿನೇಶ್ ಜೊತೆ ಮದುವೆ ನಡೆದಿದ್ದು, ಮಾಂಗಲ್ಯ ಧಾರಣೆ ಆಗುತ್ತಲೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬಂದ ನವವಧು ಅಂತಿಮ ವರ್ಷದ ಬಿಕಾಂ ಆದಾಯ ತೆರಿಗೆ ಎರಡು ವಿಷಯಗಳ ಪರೀಕ್ಷೆ ಬರೆದಿದ್ದಾರೆ. ಇನ್ನು ಪರೀಕ್ಷೆ ಬರೆಯಲೇಬೇಕೆಂಬ ಯುವತಿ ಆಸೆಗೆ ಆಕೆಯ ಪೋಷಕರು ಸಾಥ್ ನೀಡಿದ್ದಾರೆ..