ಕರ್ನಾಟಕ
ಮಂಗಳೂರಿನಲ್ಲಿ ಸಂಧಾನಕ್ಕೆ ಬಂದ ವ್ಯಕ್ತಿಯ ಕೊಲೆ
ಹೆಂಡತಿ ಗಂಡನ ಮನೆ ಬಿಟ್ಟು ತವರು ಸೇರಿದಳು ಅಂತ ಮದುವೆ ಮಾಡಿಸಿದವನನ್ನೇ ಕೊಲೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹೆಂಡತಿ ಗಂಡನ ಮನೆ ಬಿಟ್ಟು ತವರು ಸೇರಿದಳು ಅಂತ ಮದುವೆ ಮಾಡಿಸಿದವನನ್ನೇ ಕೊಲೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸುಲೈಮಾನ್ (50) ಮೃತ ವ್ಯಕ್ತಿ. ಸಂಬಂಧಿ, ಆರೋಪಿ ಮುಸ್ತಫಾ (30) ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದನು. ಆದರೆ ಮಂಗಳೂರು ಗ್ರಾಮಾಂತರ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸುಲೈಮಾನ್ ಸಂಬಂಧಿ ಮುಸ್ತಫಾ ಎಂಬವರ ಮದುವೆಯನ್ನು ನೆರವೇರಿಸಿದ್ದರು. ಇಬ್ಬರ ನಡುವೆ ಮದುವೆ ಸಂದರ್ಭದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಮುಸ್ತಫಾ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸುಲೈಮಾನ್ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಮುಸ್ತಫಾ ಸುಲೈಮಾನ್ಗೆ ಚೂರಿಯಿಂದ ಇರಿದಿದ್ದಾನೆ. ಗಲಾಟೆಯಲ್ಲಿ ಸುಲೈಮಾನ್ ನ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಅವರ ಮೇಲೂ ಮುಸ್ತಫಾ ದಾಳಿಯಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.