
ತೆಲುಗು, ಕನ್ನಡ ಸೇರಿ ಸೂಪರ್ ಹಿಟ್ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿರುವ ಜನಪದ ಗಾಯಕಿ ಮಂಗ್ಲಿ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಖ್ಯಾತ ಗಾಯಕಿ ಮಂಗ್ಲಿ ಅವರಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ.. ತ್ರಿಪುರಾದ ರೆಸಾರ್ಟ್ವೊಂದರಲ್ಲಿ ತನ್ನ ಬರ್ತ್ಡೇ ಪಾರ್ಟಿಯಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ರು.. ಪರಿಣಾಮವಾಗಿ, ಮಂಗ್ಲಿ ಮತ್ತು ಇತರ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ನನ್ನ ಕುಟುಂಬದೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ನಾನು ಬರ್ತ್ಡೇ ಪಾರ್ಟಿ ಆಯೋಜಿಸಿದ್ದೆ. ಇದು ನನ್ನ ಪೋಷಕರ ಇಚ್ಛೆಯಂತೆ ನಡೆಯಿತು. ಈ ಪಾರ್ಟಿಯಲ್ಲಿ ನನ್ನ ಕುಟುಂಬದ ಎಲ್ಲ ಸದಸ್ಯರು, ಸಂಬಂಧಿಕರು, ಸ್ನೇಹಿತರೂ ಹಾಜರಿದ್ರು. ಡ್ರಿಂಗ್ಸ್ ಮತ್ತು ಸಾಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದ್ರೆ ಇವುಗಳಿಗೆ ಅನುಮತಿ ಅಗತ್ಯವಿದೆ ಅನ್ನೋದು ನನಗೆ ಗೊತ್ತಿರಲಿಲ್ಲ. ರೆಸಾರ್ಟ್ನಲ್ಲಿ ಹಠಾತ್ತನೆ ಪಾರ್ಟಿ ಮಾಡಲಾಗಿತ್ತು. ಯಾರಾದ್ರೂ ನನಗೆ ಮಾಹಿತಿ ಕೊಟ್ಟಿದ್ದರೆ ಖಂಡಿತವಾಗಿ ಬೇಕಾದ ಅನುಮತಿ ಪಡೆದುಕೊಳ್ಳುತ್ತಿದೆ. ಯಾರೊಬ್ಬರೂ ಅನುಮತಿ ಅಗತ್ಯ ಅಂತ ನನಗೆ ಹೇಳಲಿಲ್ಲ. ನಾನು ತಿಳಿದೂ ತಿಳಿದೂ ಯಾವುದೇ ತಪ್ಪು ಮಾಡಿಲ್ಲ. ಮಾದಕ ದ್ರವ್ಯ ಸೇವನೆಗೆ ಪಾಸಿಟಿವ್ ಪರೀಕ್ಷೆ ನಡೆಸಿದ ವ್ಯಕ್ತಿ ಬೇರೆಡೆ ಸೇವಿಸಿದ್ದಾನೆ. ಪೊಲೀಸರು ಅದನ್ನ ತನಿಖೆ ಮಾಡುತ್ತಿದ್ದಾರೆ. ದಯವಿಟ್ಟು ಯಾವುದೇ ಆರೋಪಗಳನ್ನ ಮಾಡಬೇಡಿ ಎಂದು ಹೇಳಿದ್ದಾರೆ.
ಇನ್ನು ಮಂಗ್ಲಿ ಬರ್ತ್ ಡೇ ಪಾರ್ಟಿಯಲ್ಲಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಸೇರಿ 48 ಮಂದಿಯಷ್ಟೇ ಭಾಗಿಯಾಗಿದ್ದರು. 48 ಮಂದಿಯ ಡ್ರಗ್ಸ್ ಪರೀಕ್ಷೆಯಲ್ಲಿ 9 ಜನಕ್ಕೆ ಡ್ರಗ್ಸ್ ಪಾಸಿಟಿವ್ ಬಂದಿದೆ. NDPS ಆ್ಯಕ್ಟ್ ಹಾಗೂ ಶಬ್ದ ಮಾಲಿನ್ಯ ಕಾಯಿದೆಯಡಿ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.