
ಹೈದರಾಬಾದ್: ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಕಿರಿಯ ಮಗ ಅಕ್ಕಿನೇನಿ ಅಖಿಲ್ ಅವರ ಮದುವೆ ಇಂದು ಅದ್ಧೂರಿಯಾಗಿ ನೆರವೇರಿದೆ.. ಬ್ಯಾಚುಲರ್ ಜೀವನಕ್ಕೆ ಗುಡ್ ಬಾಯ್ ಹೇಳಿ ದಾಂಪತು ಜೀವನಕ್ಕೆ ಕಾಲಿಟ್ಟಿದ್ದಾರೆ.. ತಮ್ಮ ಗೆಳತಿ ಝೈನಾಬ್ ರಾವಡ್ಜಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗಿನ ಜಾವ ಮೂರು ಗಂಟೆಗೆ ಜುಬಿಲಿ ಹಿಲ್ಸ್‌ನಲ್ಲಿರುವ ನಾಗಾರ್ಜುನ ಅವರ ನಿವಾಸದಲ್ಲಿ ಅದ್ಧೂರಿಯಾಗಿ ವಿವಾಹ ನಡೆದಿದೆ.. ಮದುವೆ ಕಾರ್ಯಕ್ರಮದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.
ಮದುವೆಯ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ – ಸುರೇಖಾ, ರಾಮ್ ಚರಣ್-ಉಪಾಸನಾ ದಂಪತಿ, ನಿರ್ದೇಶಕ ಪ್ರಶಾಂತ್ ನೀಲ್, ನಾಯಕ ಸುಮಂತ್ ಮತ್ತು ಇತರರು ಹಾಜರಿದ್ದ ಗಣ್ಯರು ನವ ದಂಪತಿಗಳಿಗೆ ಶುಭ ಹಾರೈಸಿದರು. ಮದುವೆಯ ನಂತರ ನಡೆದ ಬಾರಾತ್‌ನಲ್ಲಿ ನಾಯಕ ನಾಗ ಚೈತನ್ಯ ಭಾಗವಹಿಸಿದ್ದರು. ಜೂನ್ 8 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಚಲನಚಿತ್ರ, ರಾಜಕೀಯ ಮತ್ತು ಕೈಗಾರಿಕಾ ಮುಖಂಡರು ಭಾಗವಹಿಸಲಿದ್ದಾರೆ.