ಕರ್ನಾಟಕHomeಕ್ರೀಡೆಜಿಲ್ಲೆದೇಶಸುದ್ದಿ

ರಾಜ್‌ಕುಮಾರ್‌ ಸಾವಿನ ವೇಳೆ 4 ಮಂದಿಗೆ ಗುಂಡೇಟು ಹೊಡೆದು ಸಾಯಿಸಿದ್ರು, ಅಂದು ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ?- ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದು ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸುವ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 11 ಜನರು ಉಸಿರು ಚೆಲ್ಲಿದ್ದಾರೆ. ಸರ್ಕಾರವೇ ಇದಕ್ಕೆ ನೇರಹೊಣೆ ಅಂತಾ ಮಾಜಿ ಸಿಎಂ ಹೆಚ್​​​ಡಿ ಕುಮಾರಸ್ವಾಮಿ ಆರೋಪಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿದ್ದರು.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಿಎಂ ರಾಜೀನಾಮೆ ಕೇಳುವ ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು. ಡಾ. ರಾಜ್‌ಕುಮಾರ್‌ ತೀರಿಕೊಂಡಾಗ 4 ಜನರಿಗೆ ಗುಂಡು ಹೊಡೆಸಿದ್ರಲ್ಲ, ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ ಅಂತ ಕಾಂಗ್ರೆಸ್‌ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ. ರಾಜ್‌ಕುಮಾರ್ ತೀರಿಕೊಂಡಾಗ ನಾಲ್ಕು ಜನರಿಗೆ ಗುಂಡೇಟು ಹೊಡೆಸಿದ್ರು.‌

ಕಂಠೀರವ ಸ್ಟುಡಿಯೋದಲ್ಲಿ ಆಗ ನಾನೂ ಇದ್ದೆ. ಆಗ ಕುಮಾರಸ್ವಾಮಿ ರಾಜೀನಾಮೆ ನೀಡಿದ್ರಾ..? ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಮಂದಿ ಸತ್ರು, ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ಆಗಿ ಹಲವರು ಸತ್ರು. ಪ್ರಧಾನಿ ಮೋದಿ , ಅಮಿತ್ ಶಾ ರಾಜೀನಾಮೆ ನೀಡಿದ್ರಾ..? ಮೋದಿ, ಶಾ ರಾಜೀನಾಮೆ ಕೊಡಿಸಲಿ, ನಾವೂ ಕೂಡ ಸಿಎಂ, ಡಿಸಿಎಂ ರಾಜೀನಾಮೆ ಕೊಡಿಸ್ತೀವಿ ಅಂತ ಹೇಳಿದ್ದಾರೆ.

Lavanya

ಸಮ್ರಾಟ್‌ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ. ಸಿನಿಮಾ ಸುದ್ದಿಗಳ ಬಗ್ಗೆ ಅಪಾರ ಆಸಕ್ತಿ. ಪುಸ್ತಕ ಓದುವುದು, ಸಿನಿಮಾ ವೀಕ್ಷಣೆ, ಹಾಡು ಕೇಳುವುದು ನನ್ನ ಹವ್ಯಾಸಗಳು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker