ಸಾಯಿ ಲೇಔಟ್ಗೆ ಭೇಟಿ ಕೊಟ್ಟ ಸಿಎಂ ಮೇಲೆ ಸಾರ್ವಜನಿಕರ ಆಕ್ರೋಶ
ಮಳೆ ನೀರಿನಿಂದ ಹಾನಿಗೊಳಗಾದ ಸಾಯಿ ಲೇಔಟ್ಗೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಗೆ ಸಾಯಿ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳು ಮುಳುಗಡೆ ಆಗಿವೆ. ಮಳೆ ನೀರಿನಿಂದ ಹಾನಿಗೊಳಗಾದ ಸಾಯಿ ಲೇಔಟ್ಗೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಅಧಿಕಾರಿಗಳು ಭೇಟಿ ನೀಡಿ, ಅಧಿಕಾರಿಗಳ ಬಳಿ ಮಾಹಿತಿ ಪಡೆದರು.
ಈ ವೇಳೆ ಸಾಯಿ ಲೇಔಟ್ಗೆ ಭೇಟಿ ನೀಡಿದ ಸಿಎಂ ಮತ್ತು ಸ್ಥಳೀಯ ಶಾಸಕ ಭೈರತಿ ಬಸವರಾಜ್ಗೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಬನ್ನಿ ಮಳೆಯಿಂದ ತೊಂದರೆಯಾದ ಮನೆಗಳಿಗೆ ಭೇಟಿ ನೀಡಿ. ದೂರದಿಂದ ನೋಡಿದ್ರೆ ನಿಮಗೆ ಏನು ಗೊತ್ತಾಗುತ್ತೆ? ಎಂದು ಸ್ಥಳೀಯ ಮಹಿಳೆಯರು ಸಿಎಂಗೆ ಆಗ್ರಹಿಸಿದರು. ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರನ್ನ ಸಮಾಧಾನ ಪಡಿಸಲು ಪ್ರಯತ್ನಿಸಿದರು.
ಆದರೆ ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಿಎಂ, ಡಿಸಿಎಂ, ಅಧಿಕಾರಿಗಳು ಬಸ್ನಲ್ಲಿ ತೆರಳಲು ಸಜ್ಜಾದರು. ಬೇಗ ಬಸ್ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾಯಿ ಲೇಔಟ್ನಿಂದ ಹೊರಡಲು ಸಿಎಂ, ಸಚಿವರು ಸಜ್ಜಾಗುತ್ತಿದ್ದಂತೆ ಸ್ಥಳೀಯ ಮಹಿಳೆಯರು ತಡೆಯಲು ಯತ್ನಿಸಿದರು. ಕಷ್ಟ ಸುಖ ಕೇಳಲು ನೀವು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸ್ಥಳೀಯರನ್ನು ತಡೆದ ಪೋಲೀಸರು, ಹಗ್ಗ ಹಾಕಿ ಸಿಎಂ ಹಾಗೂ ಅಧಿಕಾರಿಗಳಿಗೆ ರಕ್ಷಣೆ ನೀಡಿದರು.