
ಬೆಳಗಾವಿ: ಐಪಿಎಲ್ ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುತ್ತಿಡುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿತ್ತು, ಈ ವೇಳೆ ಹೃದಯಾಘಾತದಿಂದ ಓರ್ವ ಅಭಿಮಾನಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಕುಂಬಾರ (25) ಜೀವ ಬಿಟ್ಟಿದ್ದಾರೆ. ಆರ್ಸಿಬಿ ಫೈನಲ್ ಮ್ಯಾಚ್ ಗೆದ್ದಿದ್ದಕ್ಕೆ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ಆದ್ರೆ ಇದೇ ವೆಳೆ ಮಂಜುನಾಥ ಕುಣಿದು ಕುಪ್ಪಳಿಸುತ್ತಿದ್ದಾಗ ಹೃದಯಾಘಾತದಿಂದ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.