
ನವದೆಹಲಿ: ದೆಹಲಿಯ ಅಪಾರ್ಟ್ಮೆಂಟ್ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದ್ವಾರಕಾ ಸೆಕ್ಟರ್ 13ರ ಶಾಬಾದ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾಯದಿಂದ ಪಾರಾಗಲು ಬಾಲ್ಕನಿಯಿಂದ ಹಾರಿದ ಇಬ್ಬರು ಮಕ್ಕಳು ಹಾಗೂ ತಂದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಯಶ್ ಯಾದವ್ (35 ವರ್ಷ) ಹಾಗೂ ಇಬ್ಬರು ಮಕ್ಕಳು ಸಾವ*ನ್ನಪ್ಪಿದ್ದಾರೆ. ಆದರೆ ಯಾದವ್ ಪತ್ನಿ ಹಾಗೂ ಹಿರಿಯ ಪುತ್ರನನ್ನು ಅಗ್ನಿ ಅವಘಡದಿಂದ ರಕ್ಷಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ದ್ವಾರಕಾ ಸೆಕ್ಟರ್ 13ರಲ್ಲಿನ ಎಂಆರ್ ವಿ ಶಾಲೆ ಸಮೀಪದ ಸಂಪತ್ ಸೊಸೈಟಿ ರೆಸಿಡೆನ್ಸಿಯಲ್ ಕಟ್ಟಡದ ಎಂಟು ಮತ್ತು ಒಂಬತ್ತನೇ ಅಂತಸ್ತಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತಂದೆ ತನ್ನ ಇಬ್ಬರು ಮಕ್ಕಳೊಂದಿಗೆ 9ನೇ ಮಹಡಿಯಿಂದ ಕೆಳಗೆ ಹಾರಿದ್ದು, ಮೂವರು ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಇನ್ನು ಅಪಾರ್ಟ್ ಮೆಂಟ್ನಲ್ಲಿ ಸಂಭವಿಸಿದ್ದು, ದಟ್ಟ ಹೊಗೆ ಆವರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.