
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಮ್ಯಾಕ್ಸ್ವೆಲ್ ಅವರು ಟಿ20 ತಂಡದ ಭಾಗವಾಗಿ ಮಾತ್ರ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮ್ಯಾಕ್ಸ್ವೆಲ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಾಗ್ಯೂ ಅವರು ಟಿ20 ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಕೊನೆಯ ಬಾರಿಗೆ ಮ್ಯಾಕ್ಸ್ವೆಲ್ ಟೆಸ್ಟ್ ಆಡಿದ್ದು 2017 ರಲ್ಲಿ. ನಂತರ ಅವರು ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಆಗಿಲ್ಲ. ಒಟ್ಟು 149 ಏಕದಿನ ಪಂದ್ಯವಾಡಿರುವ ಮ್ಯಾಕ್ಸ್ವೆಲ್ 136 ಇನ್ನಿಂಗ್ಸ್ಗಳಿಂದ 33.81 ಸರಾಸರಿಯಲ್ಲಿ 3,990 ರನ್ ಹೊಡೆದಿದ್ದಾರೆ. ಈ ಆಟದಲ್ಲಿ 4 ಶತಕ, 23 ಅರ್ಧಶತಕ ಬಾರಿಸಿದ್ದಾರೆ. 77 ವಿಕೆಟ್ ಪಡೆದಿದ್ದಾರೆ.
ಮ್ಯಾಕ್ಸ್ವೆಲ್ ಇತ್ತೀಚೆಗೆ ಬೆರಳಿನ ಗಾಯದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹೊರಗುಳಿಯುವ ಮೊದಲೇ ಏಕದಿನ ಪಂದ್ಯಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೆ ಎಂದು ಹೇಳಿದರು. ಕಿರಿಯ ಆಟಗಾರರು 2027 ರ ವಿಶ್ವಕಪ್ಗೆ ತಯಾರಿ ನಡೆಸಬೇಕಾದ ಸಮಯ ಬಂದಿದೆ ಎಂದು ಅವರು ಉಲ್ಲೇಖಿಸಿದರು.
2012ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಮ್ಯಾಕ್ಸ್ವೆಲ್ ಅವರ ಸ್ಪೋಟಕ ಬ್ಯಾಟಿಂಗ್ ನಿಂದ ಹೆಸರು ಮಾಡಿದ್ದಾರೆ. 2023ರ ಏಕದಿನ ವಿಶ್ವಕಪ್ ನ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರೂ ಸೋಲುವ ಸಂದರ್ಭದಿಂದ ತಂಡವನ್ನು ಮೇಲಕ್ಕೆತ್ತಿದ್ದರು. ಒಂದು ಕಾಲಿನಲ್ಲಿ ನಿಂತು ಆಟವಾಡಿ ಅಜೇಯ ದ್ವಿಶತಕ ಬಾರಿಸಿದ್ದರು. ಇದು ಏಕದಿನ ಕ್ರಿಕೆಟ್ ಇತಿಹಾಸದ ಅತ್ಯುನ್ನತ ಇನ್ನಿಂಗ್ಸ್ ಗಳಲ್ಲಿ ಒಂದಾಗಿದೆ.