ಕರ್ನಾಟಕHomeಜಿಲ್ಲೆದೇಶಬೆಂಗಳೂರುಸುದ್ದಿ

ಪೊಲೀಸ್‌ ಠಾಣೆಗೆ ಪತ್ನಿ ರುಂಡ ತಂದು ಪೊಲೀಸರಿಗೆ ಶರಣಾದ ಪತಿ

ಪತ್ನಿಯನ್ನ ಕೊಂದು, ಆಕೆಯ ರುಂಡದೊಂದಿಗೆ ಪತಿ ಪೊಲೀಸ್‌ ಠಾಣೆಗೆ ತೆರೆಳಿ ಶರಣಾಗಿದ್ದಾನೆ.

ಆನೇಕಲ್‌: ಪತ್ನಿಯನ್ನ ಕೊಂದು, ಆಕೆಯ ರುಂಡದೊಂದಿಗೆ ಪತಿ ಪೊಲೀಸ್‌ ಠಾಣೆಗೆ ತೆರೆಳಿ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಾ ರೆಡ್‌ಹ್ಯಾಂಡಾಗಿ ಪತ್ನಿ ಸಿಕ್ಕಿಬಿದ್ದಿದ್ದು, ಶಂಕರ್ (28) ಪತ್ನಿಯ ರುಂಡ ಕಡಿದ ಆರೋಪಿ. ಹೆಬ್ಬಗೋಡಿ ನಿವಾಸಿ ಮಾನಸ (26) ಕೊಲೆಯಾದ ಮಹಿಳೆ. ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿ ನಿವಾಸಿ ಆಗಿದ್ದ ಪತಿ ಶಂಕರ್‌ ಪತ್ನಿ ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ‌ ಪತಿ ಆಕೆಯ ರುಂಡ ಕಡಿದು ಸೂರ್ಯನಗರ ಠಾಣೆಗೆ ಕೊಂಡೊಯ್ದಿದ್ದಾನೆ. ಬಳಿಕ ಪೊಲೀಸರು ಆತನನ್ನ ಬಂಧಿಸಿದ್ದಾರೆ.

ಮಾನಸ ಮತ್ತು ಶಂಕರ್‌ ಪ್ರೀತಿಸಿ ಮದುವೆಯಾಗಿದ್ದರು. ತಿಂಗಳ ಹಿಂದಷ್ಟೇ ಹೀಲಲಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್‌ ಆಗಿದ್ದರು. ಇದೇ ತಿಂಗಳ 3ನೇ ತಾರೀಖು ಶಂಕರ್‌ ಕೆಲಸದ ನಿಮಿತ್ತ ತೆರಳಿದ್ದ, ಹೊರಡುವಾಗ ಮಾರನೆ ದಿನ ಬರುವುದಾಗಿ ಹೇಳಿದ್ದ. ಆದ್ರೆ ಕೆಲಸ ಬೇಗ ಮುಗಿದ ಹಿನ್ನೆಲೆ ಪತ್ನಿ ಒಬ್ಬಳೆ ಇರ್ತಾಳೆಂದು ತಡರಾತ್ರಿಯೇ ವಾಪಸ್‌ ಆಗಿದ್ದ. ಆದ್ರೆ ಗಂಡನ ಚಿಂತೆಯೇ ಇಲ್ಲದೇ ಪತ್ನಿ ಪ್ರಿಯಕರನೊಂದಿಗೆ ಚಕ್ಕಂದವಾಡ್ತಾ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಳು.

ಇದರಿಂದ ಆಕ್ರೋಶಗೊಂಡ ಪತಿ ಶಂಕರ್‌ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ನೀನು ನನಗೆ ಬೇಡ ಅಂತ ಪ್ರಿಯಕರನ ಜೊತೆಗೇ ಕಳಿಸಿದ್ದ. ಆದ್ರೆ ಪತ್ನಿ ಮಾನಸ ಮಾತ್ರ ಪದೇ ಪದೇ ಟಾರ್ಚರ್‌ ಮಾಡುತ್ತಿದ್ದಳಂತೆ. ನಿನ್ನೆ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಳಂತೆ. ಇದರಿಂದ ಬೇಸತ್ತ ಪತಿ ಆಕೆಯ ತಲೆ ಕಡೆದು ಠಾಣೆಗೆ ಸೂರ್ಯನಗರ ಪೊಲೀಸ್‌ ಠಾಣೆಗೆ ತೆಗದುಕೊಂಡು ಬಂದಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

Lavanya

ಸಮ್ರಾಟ್‌ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ. ಸಿನಿಮಾ ಸುದ್ದಿಗಳ ಬಗ್ಗೆ ಅಪಾರ ಆಸಕ್ತಿ. ಪುಸ್ತಕ ಓದುವುದು, ಸಿನಿಮಾ ವೀಕ್ಷಣೆ, ಹಾಡು ಕೇಳುವುದು ನನ್ನ ಹವ್ಯಾಸಗಳು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker