
ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದು, ಓರ್ವ ಸಾವನ್ನಪ್ಪಿದ ಘಟನೆ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸಮೀಪ ನಡೆದಿದೆ. ಆದರ್ಶ (21) ಮೃತ ಯುವಕ. ಕಳೆದ ರಾತ್ರಿ ಯನಮಲಪಾಡಿಯಿಂದ ಬಟ್ಲಹಳ್ಳಿ ಕಡೆಗೆ ಬರುತ್ತಿದ್ದ ಕಾರು 11:30ಕ್ಕೆ ಚಾಲಕನ ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟಿದ್ದು. ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಮೃತ ವ್ಯಕ್ತಿಯನ್ನು ಕೋಲಾರ ಜಿಲ್ಲೆ ಶ್ರಿನಿವಾಸಪುರ ತಾಲ್ಲೂಕು ಗೌನಿಪಲ್ಲಿ ಮೂಲದ ಸೋಗಿಲವಾರಪಲ್ಲಿ ಗ್ರಾಮದ ಆದರ್ಶ ಎಂದು ಗುರುತಿಸಲಾಗಿದ್
ನೀರಿನ ಹೊಂಡಕ್ಕೆ ಕಾರು ಬಿದ್ದು ಓರ್ವ ಜೀವಬಿಟ್ಟಿರೋ ಘಟನೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಸಮೀಪ ನಡೆದಿದೆ. ಕಳೆದ ರಾತ್ರಿ ಯನಮಲಪಾಡಿಯಿಂದ ಬಟ್ಲಹಳ್ಳಿ ಕಡೆಗೆ ಬರುತ್ತಿದ್ದ ಕಾರು 11:30ಕ್ಕೆ ಚಾಲಕನ ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿದೆ. ಪರಿಣಾಮ ಆದರ್ಶ (21) ಯುವಕ ಉಸಿರು ಚೆಲ್ಲಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.