
ಗುಜರಾತ್ನ ಅಹಮದಾಬಾದ್ನಲ್ಲಿ ಏಕಾಏಕಿ ವಿಮಾನ ಪತನಗೊಂಡಿದೆ. ಅಹಮದಾಬಾದ್ ಏರ್ಪೋರ್ಟ್ ಬಳಿ ವಿಮಾನ ಪತನಗೊಂಡ ಪರಿಣಾಮ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ದುರಂತದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಮೊಬೈಲ್ನಲ್ಲಿ ಸೆರೆಯಾದ ದೃಶ್ಯದಲ್ಲಿ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಪತನವಾಗಿದೆ.
ಇನ್ನು ಎಲ್ಲಾ ಸಂವಹನಗಳು ಕಳೆದುಹೋಗುವ ಮೊದಲು ವಿಮಾನದಿಂದ “ಮೇಡೇ” ಕರೆ ಬಂದಿದೆ ಎಂದು ವಾಯು ಸಂಚಾರ ನಿಯಂತ್ರಣ ಮಂಡಳಿ ವರದಿ ಮಾಡಿದೆ. ವಿಮಾನ ಟೇಕ್ ಆಫ್ ಆದ ತಕ್ಷಣ ವಿಮಾನ ನಿಲ್ದಾಣದ ಪರಿಧಿಯ ಹೊರಗೆ ನೆಲಕ್ಕೆ ಬಿದ್ದಿತು, ಅಪಘಾತದ ಸ್ಥಳದಿಂದ ಭಾರೀ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದೆ ಎಂದು ಡಿಜಿಸಿಎ ತಿಳಿಸಿದೆ. ಈ ಹಾರಾಟವು 8,200 ಗಂಟೆಗಳ ಕಾಲ ಹಾರಾಟದ ಅನುಭವ ಹೊಂದಿರುವ ಟೈಪ್ ಕಮಾಂಡರ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು 1,100 ಗಂಟೆಗಳ ಕಾಲ ಹಾರಾಟದ ಅನುಭವ ಹೊಂದಿರುವ ಪ್ರಥಮ ಅಧಿಕಾರಿ ಡ್ರೈವ್ ಕುಂದರ್ ಅವರ ನೇತೃತ್ವದಲ್ಲಿತ್ತು.