ಕರ್ನಾಟಕHomeಜಿಲ್ಲೆತುಮಕೂರುದೇಶರಾಮನಗರಸುದ್ದಿ

ರಾಮನಗರಕ್ಕೆ ನೀರಿನ ಅವಶ್ಯಕತೆ ಇಲ್ಲ, ನೀರಿನ ವಿಚಾರವಾಗಿ ರಾಜಕಾರಣ ಮಾಡ್ತಿದ್ದಾರೆ-ಡಿ.ಕೆ ಶಿವಕುಮಾರ್‌

ಹೇಮಾವತಿ ಲಿಂಕ್ ಕೆನಾಲ್ ಹೋರಾಟದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಮಾತನಾಡಿದ್ದಾರೆ.

ಬೆಂಗಳೂರು: ಹೇಮಾವತಿ ಲಿಂಕ್ ಕೆನಾಲ್ ಹೋರಾಟದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಮಾತನಾಡಿದ್ದು, ನೀರಿನ ವಿಚಾರವಾಗಿ ರಾಜಕಾರಣ ಮಾಡ್ತಿದ್ದಾರೆ. ಕುಣಿಗಲ್​ಗೆ ಕಳೆದ 10 ವರ್ಷದಿಂದ ಅನ್ಯಾಯ ಆಗಿದೆ. ಅದನ್ನ ಸರಿಪಡಿಸಲು ಹೊರಟ್ಟಿದ್ದೇವೆ ಎಂದು ಡಿಕೆ ಶಿವಕುಮಾರ್​ ಹೇಳಿದರು.ಬೆಂಗಳೂರನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ. ಶಿವಕುಮಾರ್​​ ಈ ಯೋಜನೆಯನ್ನ ರಾಜಕೀಯ ಮಾಡ್ತಾ ಇದ್ದಾರೆ. ಅಸೂಯೆಯಿಂದ ಕುಣಿಗಲ್​ಗೆ ಹೋಗಬೇಕಾದ ನೀರನ್ನ ತಡೆದಿದ್ದಾರೆ. 10 ವರ್ಷ ಕುಣಿಗಲ್​ಗೆ ಅನ್ಯಾಯ ಆಗ್ತಿದೆ. ಈ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ರಾಮನಗರಕ್ಕೆ ಈ ನೀರಿನ ಅವಶ್ಯಕತೆ ಇಲ್ಲ. ಬೆಂಗಳೂರಿಗೂ ನೀರಿನ ಸಮಸ್ಯೆ ಇಲ್ಲ.

ಕುಣಿಗಲ್​ಗೆ ಆಗಿರೋ ಅನ್ಯಾಯವನ್ನ ಸರಿ ಮಾಡಲು ಹೊರಟ್ಟಿದ್ದೇವೆ. ಮಾಗಡಿಗೂ ನೀರು ಕಡಿಮೆ ಆಗಿತ್ತು. ಇದೇನೂ ರಾಜ್ಯ ರಾಜ್ಯದ ನಡುವಿನ ಗಲಾಟೆ ಅಲ್ಲ. ಕೆಲವೊಂದು ವಿಚಾರಗಳನ್ನ ಬಿಚ್ಚಿ ಮಾತನಾಡಲ್ಲ. ಈ ಕುರಿತು ಹಿಂದೆಯೂ ವಿಧಾನಸೌದದಲ್ಲಿ ಮೀಟಿಂಗ್ ಮಾಡಲಾಗದೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ನೀವೇನೂ ಮಾತನಾಡಿದ್ದೀರಾ, ಅದಕ್ಕಿಂತ ಹೆಚ್ಚು ನಾನು ಮಾತನಾಡಬಹುದು. ರೈತರನ್ನ ಇದರ ವಿರುದ್ದ ಎತ್ತಿಕಟ್ಟಿದ್ದಾರೆ, ಅದಕ್ಕೆ ಪೊಲೀಸರು ಕೇಸ್​ ಹಾಕಿದ್ದಾರೆ. ಹಾಗಾದರೆ ಕುಣಿಗಲ್​ ರೈತರು ಬೇರೆ ರಾಮನಗರ ರೈತರು ಬೇರೆನಾ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಇನ್ನು ತುಮಕೂರಿನಿಂದ ರಾಮನಗರಕ್ಕೆ ನೀರು ಒದಗಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ನಿಷೇಧಾಜ್ಞೆಯ ನಡುವೆಯೂ ರೈತರು, ರಾಜಕೀಯ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು. ನೀರಿಗಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಗುಬ್ಬಿ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

Lavanya

ಸಮ್ರಾಟ್‌ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ. ಸಿನಿಮಾ ಸುದ್ದಿಗಳ ಬಗ್ಗೆ ಅಪಾರ ಆಸಕ್ತಿ. ಪುಸ್ತಕ ಓದುವುದು, ಸಿನಿಮಾ ವೀಕ್ಷಣೆ, ಹಾಡು ಕೇಳುವುದು ನನ್ನ ಹವ್ಯಾಸಗಳು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker