
ನಟ ಮಡೆನೂರು ಮನು ವಿರುದ್ಧ ಸಹನಟಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಮನು ಅವರ ಪತ್ನಿ ಮಾತನಾಡಿದ್ದಾರೆ. ನನ್ನ ಗಂಡ ತಪ್ಪು ಮಾಡಿದ್ದರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ಇದು ಒಂದು ಷಡ್ಯಂತ್ರವಾಗಿದೆ. ಸಹನಟಿಯು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ, ಎಂದು ಆರೋಪಿಸಿದ್ದಾರೆ.
ವೈಯಕ್ತಿಕ ವಿಷಯವನ್ನು ತನಿಖೆಗೆ ಬಿಡಿ, ಆದರೆ ಸಿನಿಮಾವನ್ನು ನೋಡಿ, ಎಂದು ಆಕೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮನು ಅವರ ಚೊಚ್ಚಲ ನಾಯಕನಟನ ಚಿತ್ರ ‘ಕುಲದಲ್ಲಿ ಕೀಳ್ಯಾವುದೋ’ ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕಾಗಿ ಮನು ಕಳೆದ ಮೂರು ವರ್ಷಗಳಿಂದ ಶ್ರಮಿಸಿದ್ದಾರೆ. ಆರು ತಿಂಗಳಿಂದ ನನ್ನ ಗಂಡ ದೇಹದಾರ್ಢ್ಯಕ್ಕಾಗಿ ಕಠಿಣ ಶ್ರಮಪಟ್ಟಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ಮತ್ತು ತಾರಾಬಳಗ ತುಂಬ ಕಷ್ಟಪಟ್ಟು ಚಿತ್ರವನ್ನು ರೂಪಿಸಿದ್ದಾರೆ ಎಂದು ಮನು ಅವರ ಪತ್ನಿ ಹೇಳಿದ್ದಾರೆ.
ಇಂದು ಮನು ಥಿಯೇಟರ್‌ನಲ್ಲಿ ತಮ್ಮ ಚಿತ್ರವನ್ನು ನೋಡಲು ಇಲ್ಲ, ಇದು ನನಗೆ ಬೇಸರವಾಗಿದೆ. ಆದರೆ, ಯಾರಿಗೂ ಮೋಸವಾಗದಿರಲಿ, ಎಲ್ಲರೂ ಸಿನಿಮಾ ನೋಡಿ, ಎಂದು ಆಕೆ ಒತ್ತಿ ಹೇಳಿದ್ದಾರೆ. ಇನ್ನು ನನ್ನ ಗಂಡ ತಪ್ಪು ಮಾಡಿದ್ದರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ಇದು ಒಂದು ಷಡ್ಯಂತ್ರವಾಗಿದೆ. ಸಹನಟಿಯು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ, ಎಂದು ಆರೋಪಿಸಿದ್ದಾರೆ.
ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಎಂದರೆ, ಅವನನ್ನು ಬೆಳೆಯಲು ಬಿಡಬೇಕು. ಕಳೆದ ಅಷ್ಟು ವರ್ಷ ರಿಲೇಶನ್‌ಶಿಪ್‌ನಲ್ಲಿದ್ದರೆ ಮೊದಲೇ ದೂರು ಕೊಡಬೇಕಿತ್ತು. ಈಗ ಸಿನಿಮಾ ರಿಲೀಸ್ ಸಮಯದಲ್ಲಿ ಯಾಕೆ ದೂರು ಕೊಡಬೇಕು? ಎಂದು ಕೇಳಿದ್ದಾರೆ. ರಿಯಾಲಿಟಿ ಶೋನಲ್ಲಿ ಸ್ಕ್ರಿಪ್ಟ್ ರಿಹರ್ಸಲ್ ಹೇಗಿರುತ್ತದೋ, ಇಲ್ಲಿಯೂ ಏನೋ ಒಂದು ಸ್ಕ್ರಿಪ್ಟ್ ಇದೆ. ಸತ್ಯವನ್ನು ತನಿಖೆಯಿಂದ ಹೊರಗಡೆ ತರಬೇಕು, ಎಂದು ಆಕೆ ಒತ್ತಾಯಿಸಿದ್ದಾರೆ.