
ಟಾಲಿವುಡ್ನ ಶೂಟಿಂಗ್ ಸೆಟ್ನಲ್ಲಿ ನೀರಿನ ಟ್ಯಾಂಕ್ ಸ್ಫೋಟಗೊಂಡು ಭಾರೀ ಅವಘಡ ಸಂಭವಿಸಿದೆ. ತೆಲುಗು ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರೋ ‘ದಿ ಇಂಡಿಯನ್ ಹೌಸ್’ ಸಿನಿಮಾ ಸೆಟ್ನಲ್ಲಿ ಏಕಾಏಕಿ ನೀರಿನ ದೊಡ್ಡ ಟ್ಯಾಂಕರ್ ಒಡೆದು ಹೋಗಿದೆ. ಪರಿಣಾಮ ಭಾರೀ ಪ್ರಮಾಣದ ನೀರು ನುಗ್ಗಿ ಸಹಾಯಕ ಕ್ಯಾಮೆರಾಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಂಷಾಬಾದ್ ಬಳಿ ಸಿನಿಮಾ ಶೂಟಿಂಗ್ಗಾಗಿ ದೊಡ್ಡ ನೀರಿನ ಟ್ಯಾಂಕರ್ ನಿರ್ಮಾಣ ಮಾಡಲಾಗಿತ್ತು. ಭಾರೀ ಒತ್ತಡದಿಂದಾಗಿ ನೀರಿನ ಟ್ಯಾಂಕರ್ ಸ್ಫೋಟಗೊಂಡು ಪ್ರವಾಹವೇ ಸೃಷ್ಟಿಯಾಯ್ತು. ಖ್ಯಾತನಟ ರಾಮ್ ಚರಣ್ ನಿರ್ಮಾಣದ ಈ ʻದಿ ಇಂಡಿಯಾ ಹೌಸ್ʼ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರಾಮ್ ವಂಶಿ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಅಗರ್ವಾಲ್ ಹಾಗೂ ತೇಜ್ ನಾರಾಯಣ್ ಅಗರ್ವಾಲ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದಲ್ಲಿ ರಾಮ್ ಚರಣ್ ಕೂಡ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.